ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಮ೦ದಾರ್ತಿ ರಾಮಕೃಷ್ಣರವರಿಗೆ ಯಕ್ಷಾ೦ಗಣ ಪ್ರಶಸ್ತಿ ಪ್ರದಾನ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಭಾನುವಾರ, ಡಿಸೆ೦ಬರ್ 14 , 2014
ಡಿಸೆ೦ಬರ್ 14, 2014

ಮ೦ದಾರ್ತಿ ರಾಮಕೃಷ್ಣರವರಿಗೆ ಯಕ್ಷಾ೦ಗಣ ಪ್ರಶಸ್ತಿ ಪ್ರದಾನ

ಕುಂದಾಪುರ : ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ ಆಶ್ರಯದಲ್ಲಿ ಯಕ್ಷಾಂಗಣ ಟ್ರಸ್ಟ್ ಬೆಂಗಳೂರು ಇವರ ಮೂರು ದಿನದ ಯಕ್ಷಗಾನ ಉತ್ಸವದ ಸಮಾರೋಪ ಮತ್ತು ಸನ್ಮಾನ ಕಾರ್ಯಕ್ರಮ 13-12 2014ರಂದು ಉಡುಪಿ ಜಿಲ್ಲೆಯ ಕುಂದಾಪುರದ ಕಲಾಮಂದಿರದಲ್ಲಿ ನಡೆಯಿತು. ಅತಿಥಿಯಾಗಿ ಭಾಗವಹಿಸಿದ ಪ್ರೊ. ಎಸ್,ವಿ. ಉದಯಕುಮಾರ್ ಶೆಟ್ಟಿಯವರು ``ಬಾಲ್ಯದಿಂದಲೂ ಸನ್ಮಾನಿತರೊಡೆನೆ ಒಡನಾಟ ಇದ್ದ ನನಗೆ ಇಂದು ನಡೆದ ಅಭಿನಂದನಾ ಕಾರ್ಯಕ್ರಮ ಸ್ಮರಣೀಯ. ಅನೇಕ ಶ್ರೇಷ್ಟ ಭಾಗವತರಿಗೆ ಸಾಥ್ ನೀಡಿದ ಶ್ರೀಯುತ ಮ೦ದಾರ್ತಿ ರಾಮಕೃಷ್ಣರು ಇವತ್ತಿಗೂ ವೃತ್ತಿ ಮತ್ತು ಪ್ರವೃತ್ತಿಯಲ್ಲಿ ಅಜಾತ ಶತ್ರುವಿನಂತೆ ಸೇವೆ ಸಲ್ಲಿಸುರುತ್ತಾರೆ. ಶೀಯುತರಿಗೆ ಮ೦ದಾರ್ತಿ ಅಮ್ಮನವರು ಹರಸಲಿ. ಹಾಗೆ ಬೆಂಗಳೂರಿನ ಯಕ್ಷಾಂಗಣ ಟ್ರಸ್ಟ್ನವರು ನಮ್ಮ ಕುಂದಾಪುರ, ಕೋಟ ಪರಿಸರದ ಕಲಾವಿದರನ್ನು ಗುರುತಿಸುವ ಕಾರ್ಯಕ್ಕೆ ಮುಂದಾಗಿರುವುದು ಸ್ತುತ್ಯಾರ್ಹ`` ಎಂದರು.

ಮ೦ದಾರ್ತಿ ರಾಮಕೃಷ್ಣರನ್ನು ಸನ್ಮಾನಿಸುತ್ತಿರುವುದು.
ವೇದಿಕೆಯಲ್ಲಿದ್ದ ಸಾಲಿಗ್ರಾಮ ಮಕ್ಕಳ ಮೇಳದ ನಿರ್ದೇಶಕರಾದ ಶ್ರೀದರ ಹಂದೆಯವರು `` ಇಂದು ಸನ್ಮಾನಿಸಲ್ಪಟ್ಟ ಮ೦ದಾರ್ತಿ ರಾಮನವರು ಭಾಗವತರು ಹೇಳುವ ಶಬ್ಧಗಳನ್ನು ಚಂಡೆಯಲ್ಲಿ ನುಡಿಸುತ್ತಿದ್ದರು. ಅಲ್ಲದೇ ಚೆ೦ಡೆ ಬಾರಿಸುವ ಕಲಾವಿದರಲ್ಲಿ ಅತೀ ಶ್ರೇಷ್ಟ ಕಲಾವಿದರಾಗಿದ್ದಾರೆ. ಹಾಗೆ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕ್ರತ ಪ್ರೊ. ಉದಯಕುಮಾರ್ ಶೆಟ್ಟಿಯವರು ಎಮ್.ಐ.ಟಿ. ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದರೂ, ಇಂದು ಹೆಚ್ಚಿನ ಕಲಾವಿದರ ಪರಿಚಯವನ್ನು ತಮ್ಮ ಲೇಖನ ಮೂಲಕ ಪರಿಚಯಿಸಿದ್ದಾರೆ. ನಿಜಕ್ಕೂ ಶ್ರೇಷ್ಟರಾದ ಇವರನ್ನು ಈ ಸಂದರ್ಭದಲ್ಲಿ ಅಭಿನಂದಿಸಿದ್ದು ಶ್ಲಾಘನೀಯ`` ಎಂದರು. ಹಾಗೂ ವೇದಿಕೆಯಲ್ಲಿದ್ದ ಶ್ರೀ ತ್ರಿಕಣ್ಣೇಶ್ವರೀ ವಾಣಿ ಮಾಸಪತ್ರಿಕೆಯ ಸಂಪಾದಕರಾದ ತೇಜೇಶ್ವರ ರಾವ್ ರವರು ಇಂದಿನ ಜನಾಂಗಕ್ಕೆ ಯಕ್ಷಗಾನ ಕಲೆ ಮುಟ್ಟಲು ಇಂತಹ ಉತ್ಸವಗಳು, ಹಾಗೂ ಸನ್ಮಾನಗಳು ಅತ್ಯಗತ್ಯ.

ಈ ಸಂದರ್ಭದಲ್ಲಿ ಚೆ೦ಡೆಯ ವಾದನದಲ್ಲಿ ಅದ್ವಿತೀಯತೆ ತೋರಿದ ಶ್ರೀ ಮ೦ದಾರ್ತಿ ರಾಮನವರನ್ನು 10,000/- ರೂಪಾಯಿಯೊಂದಿಗೆ ಸನ್ಮಾನಿಸಲಾಯಿತು. ಹಾಗೆಯೇ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪುರಸ್ಕೃತ ಪ್ರೊ. ಎಸ್. ವಿ. ಉದಯಕುಮಾರ್ ಶೆಟ್ಟಿ ಯವರನ್ನು ಗೌರವಿಸಲಾಯಿತು. ಹಾಗೆ ವೇದಿಕೆಯಲ್ಲಿ ಯಕ್ಷಾಂಗಣ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿಯಾದ ಶ್ರೀಮತಿ ವೀಣಾ ಮೋಹನ್ ರವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಉಪನ್ಯಾಸಕ ರಾಘವೇಂದ್ರ ತುಂಗರು ನಿರೂಪಣೆ ಮಾಡಿದರು. ಸನ್ಮಾನ ಪತ್ರವನ್ನು ಸುದೀಪ್ ಉರಾಳ ವಾಚಿಸಿದರು. ಲಂಬೋದರ ಹೆಗಡೆಯವರು ಸ್ವಾಗತ ಮತ್ತು ದನ್ಯವಾದ ಮಾಡಿದರು. ಶ್ರೀಮತಿ ವೀಣಾ ಮೋಹನ್ ರವರು ಭಾಗವಹಿಸಿದ ಗಣ್ಯರಿಗೆ ಸ್ಮರಣಿಕೆ ನೀಡಿದರು.

ಕೋಟ ಸುದರ್ಶನ ಉರಾಳರ ಸಂಯೋಜನೆಯಲ್ಲಿ ಮಾಯಾಮೃಗ ಯಕ್ಷಗಾನ ಪ್ರದರ್ಶನದಲ್ಲಿ ಭಾಗವತರಾಗಿ ಲಂಬೋದರ ಹೆಗಡೆ, ದೇವರಾಜ ದಾಸ್ ಮದ್ದಲೆಯಲ್ಲಿ ಗಣಪತಿ ಭಟ್ ಯಲ್ಲಾಪುರ, ಮಾದವ ಮಣೂರು ನಿರ್ವಹಿಸಿದರು. ಇವರಿಗೆ ಚೆ೦ಡೆಯಲ್ಲಿ ಪ್ರಖ್ಯಾತ ಚೆ೦ಡೆ ವಾದಕರಾದ ಮ೦ದಾರ್ತಿ ರಾಮ, ಶಿವಾನಂದ ಕೋಟ ಅವರು ಸಾಥ್ ನೀಡಿದರು.

ಮುಮ್ಮೇಳದಲ್ಲಿ ರಾಮನಾಗಿ ಉಪನ್ಯಾಸಕ ಸುಜಯೀಂದ್ರ ಹಂದೆ , ಲಕ್ಷ್ಮಣನಾಗಿ ನವೀನ್ ಕೋಟ, ಮಾಯಾ ಶೂರ್ಪನಖಿಯಾಗಿ ಮಾದವ ನಾಗೂರು, ಸೀತೆಯಾಗಿ ಕಡ್ಲೆ ಗಣಪತಿ ಹೆಗಡೆ, ಶೂರ್ಪನಖಿಯಾಗಿ ಗಣೇಶ ಉಪ್ಪುಂದ, ರಾವಣನಾಗಿ ತಮ್ಮಣ್ಣ ಗಾಂವ್ಕರ್, ಮಾರೀಚನಾಗಿ ನರಸಿಂಹ ತುಂಗ, ಮಾಯಾ ಜಿಂಕೆಯಾಗಿ ರಮೇಶ್ ಶೃಂಗೇರಿ, ಮತ್ತು ಸನ್ಯಾಸಿ ರಾವಣನಾಗಿ ವಿಶ್ವನಾಥ ಶೆಟ್ಟಿಯವರು ನಿರ್ವಹಿಸಿದರು. ಹಾಗೂ ಮೇಕಪ್ ನಲ್ಲಿ ರಾಜು ಪೂಜಾರಿ, ಉದಯ ಬೋವಿ, ನಾಗರಾಜರು ಸಹಕರಿಸಿದರು.



ಪ್ರೊ. ಎಸ್. ವಿ. ಉದಯಕುಮಾರ್ ಶಟ್ಟಿಯವರನ್ನು ಗೌರವಿಸುತ್ತಿರುವುದು.




ಮಾಯಾಮೃಗ ಯಕ್ಷಗಾನ ಸನ್ನಿವೇಷ.










***************************



Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ